ಪುನೀತ್ ‘ಜೇಮ್ಸ್’ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲು; ಸ್ಥಿತಿ ಗಂಭೀರ

ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ನಿರ್ಮಾಣ ಮಾಡಿದ್ದ ಸ್ಯಾಂಡಲ್ ವುಡ್‌ನ ಖ್ಯಾತ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈ ಬಿಪಿಯಿಂದ ಕಿಶೋರ್ ಅವರಿಗೆ ಸ್ಟ್ರೋಕ್ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ತಕ್ಷಣ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕಿಶೋರ್ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗತ್ತಿದೆ. ಕಿಶೋರ್ ಸ್ಥಿತಿ ಗಂಭೀರವಾಗಿದ್ದು ಕೋಮಾದಲ್ಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಸೊರ್ಸ್ : ಸುವರ್ಣ ನ್ಯೂಸ್

ಕಿಶೋರ್ ಪತ್ತಿಕೊಂಡ ಜೇಮ್ಸ್ ಸಿನಿಮಾ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಇದಾಗಿದೆ. ಅಪ್ಪು ನಿಧನದ ಬಳಿಕ ಈ ಸಿನಿಮಾ ರಿಲೀಸ್ ಆಗಿತ್ತು. ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಬಂದ ಜೇಮ್ಸ್ 2022 ಮಾರ್ಚ್ 17ರಂದು ಜೇಮ್ಸ್ ಸಿನಿಮಾ ತೆರೆಗೆ ಬಂದಿತ್ತು. ಅಪ್ಪು ನಿಧನದ ಬಳಿಕ ಬಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿರ್ಮಾಪಕ ಕಿಶೋರ್ ಅವರಿಗೆ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಗಿಂತ ಅಪ್ಪು ಇಲ್ಲ ಎನ್ನುವ ನೋವು ದೊಡ್ಡ ಮಟ್ಟದಲ್ಲಿ ಕಾಡಿತ್ತು. ಇದೀಗ ಕಿಶೋರ್ ಆಸ್ಪತ್ರೆ ಸೇರಿರುವುದು ಅವರ ಕುಟುಂಬದವರಿಗೆ ಆತಂಕ ಮನೆಮಾಡಿದೆ.